Sunday, 13 May 2012

ಮನಸ್ಸೇ ಎನ್ನ  ಮನ್ನಿಸು
ಸೃಷ್ಟಿಯ ವಿಸ್ತಾರ ನೀನು
ದೇಹದ ಸೀಮಿತ ನಾನು
ನನ್ನ ನಿನ್ನ  ನಂಟೇನು ?
ಮಂದಸ್ಮಿತೆಯೆ , ಮನೋಜ್ಯೋತಿಯೇ
ಅಕ್ಕರೆಯಿಂದ ಕರವ ಹಿಡಿದವಳೆ
ಕಾವ್ಯಾಮ್ರುತವ ಹರಿಸುವವಳೆ
ನಿನಗಿರಲಿ ನನ್ನ ಭಕ್ತಿಯ ಕಟ್ಟಳೆ .
ಸಾಕು ಸಾಕೆನಗೆ 
ತೀರದ ಈ ಹಂಚಿಕೆ 
ಬೇಕು ಬೇಕೆನಗೆ 
ಸಾವಿಲ್ಲದ ಸಂಚಿಕೆ .
ಹೃದಯ ಮಂದಿರಕೆ ದಾರಿ ಯಾವುದು?
ಅದರ ಕದದ ಕೀಲಿ ಯಾವುದು?
ಅದ ಬೆಳಗುವ ಜ್ಯೋತಿ ಯಾವುದು?
ನಿನ್ನ ಕೃಪೆಯಿಲ್ಲದೆ , ಏನೂ ಕಾಣದು.
ತರತರ ಗೀಳಿನ ಬಾಳು 
ಹೊಸಹೊಸ  ಗೀಳಿನ ಗೋಳು 
ಬೀಳದೆ ಬಲೆಗೆ ಸ್ವಲ್ಪ ತಾಳು 
ಗೀಳು ಗೋಳಿಲ್ಲದ ಜೀವನ ಬಾಳು 

Tuesday, 10 April 2012

ಗತಿಸುವ ಜೀವಗಳು 
ಘಾತಿಸುವ ಸೆಳೆತಗಳು 
ಗಮನವದರಲೆ ನಿಂತಿರಲು 
ತೆರೆವುದೆ ಮುಕ್ತಿಯ ಬಾಗಿಲು?

Sunday, 1 April 2012

ಕುಸುಮದ ಗಂಧವರಡಲು ಗಾಳಿ ಬೇಕು
ಪಕ್ಷಿಯ ಗೂಡಿಗೆ ಮರ ಬೇಕು
ಭೂಮಿಯ ಚಲನೆಗೆ ಸೂರ್ಯನಿರ ಬೇಕು
ಎನಗೆ ನಿನ್ನಯ ರಕ್ಷೆ ಬೇಕೇ ಬೇಕು