Tuesday, 10 April 2012

ಗತಿಸುವ ಜೀವಗಳು 
ಘಾತಿಸುವ ಸೆಳೆತಗಳು 
ಗಮನವದರಲೆ ನಿಂತಿರಲು 
ತೆರೆವುದೆ ಮುಕ್ತಿಯ ಬಾಗಿಲು?

Sunday, 1 April 2012

ಕುಸುಮದ ಗಂಧವರಡಲು ಗಾಳಿ ಬೇಕು
ಪಕ್ಷಿಯ ಗೂಡಿಗೆ ಮರ ಬೇಕು
ಭೂಮಿಯ ಚಲನೆಗೆ ಸೂರ್ಯನಿರ ಬೇಕು
ಎನಗೆ ನಿನ್ನಯ ರಕ್ಷೆ ಬೇಕೇ ಬೇಕು  
ಒಣ ವ್ರತಹೋಮ
ಬತ್ತಿದ ಬಾವಿಗೆ ಸಮ
ಭಕ್ತಿಯ ಭಗವ್ನಾಮ
ನೂರು ಯಾಗಕೆ ಸಮ   

ವಿಚಾರವಿಲ್ಲದ ಆಚಾರ
ಮುಳ್ಳಿಲ್ಲದ ಗಡಿಯಾರ
ವಿಚಾರವಂತರ ಆಚಾರ
ಸುಲಲಿತ ಜೀವನ ವ್ಯವಹಾರ