kannada padya - kannada poetry
Saturday, 31 March 2012
ಬುದುಕಾದಾಗ ಸರಳ
ಸೇವೆಯಾದಾಗ ಸಂಬಳ
ನ೦ಬಿಕೆಯಾಗದಾಗ ವಿರಳ
ಕಳೆವುದಾಗ ಕರ್ಮದ ಉಪಟಳ
ತಿಳಿಯಾದ ಕೊಳ
ತಿಳಿದಷ್ಟು ಆಳ
ನಿಂತಾಗ ನಿನ್ನ ತಳಮಳ
ತೇಲುವ ಪರಿ ಬಲು ಸರಳ
ಹೊಳೆಯುವ ಮುತ್ತು
ಕದಿಯಲಾರದ ಸೊತ್ತು
ಕೇಳಿದಾಗ ಗಮ್ಮತ್ತು
ನಮಪ್ಪನ ವಿದ್ವತು
Tuesday, 27 March 2012
ಉಸಿರಿಗೆ ಬೆರೆತ ನಿನ್ನ್ಹೆಸರು
ಉಸಿರಿರುವರೆಗು ಹಸಿರು
ಕಣ್ಗಳಲಿ ಬೆರೆತ ಕಣ್ಣು
ನಾನಗುವವರೆಗೂ ಹಣ್ಣು
ಕೆಂಡವೇ? ಕೋಮಲವೇ?
ಬಿಸಿಯುಸಿರೆ ? ನಿಟ್ಟುಸಿರೇ?
ಶೀತಲವೇ? ಅಗ್ನಿ ಜ್ವಾಲೆಯೇ?
ಬಯಕೆಯೇ? ಬದುಕಿನ ಆಸರೆಯೇ ?
ನಲ್ಮೆಯ ನಿನ್ನೀನೋಟ
ಮನ ಕದಡಿದ ಮಾಟ
ಅಹುದೇ ಇವೆಲ್ಲ ದಿಟ ?
ಇಲ್ಲ ಬರೀ ಎನ್ನ ಮನದ ಆಟ ?
ಬರಬರ ಬಳುಕಿ
ತರತರ ತಳುಕಿ
ಹೊರಧರ್ರ್ಮವ ಹೊಸಕಿ
ಒಳಧನಿಯ ಹಿಸುಕಿ
ಸುಗಂಧ ಸೌಧ ಕಟ್ಟಿದರೆ
ಒಳನಾತ ಒರಬಾರದೆ?
ಇರುಳ ನಡೆಗೆ ಬೆಳಕಾಗು ನೀ
ಕರುಳ ಉರಿಗೆ ತಂಪಾಗು ನೀ
ಮರುಳ ಮತಿಯ ಮರೆಮಾಡು ನೀ
ಮಂಗಳ ಮನದಿ ಮನೆಮಾಡು ನೀ
Sunday, 18 March 2012
ಚಿತ್ತವಾಗಲಿ ಚಿತ್ತಾರ
ಸತ್ಯದೊಚನೆಯೇ ಅದರ ಶೃಂಗಾರ
ಮಿಥ್ಯಾಲಾಪ ತರುವ ವಿಕಾರ
ಸತ್ಚಿತ್ತವಲ್ಲವೇ ನಿನ್ನ ಸಾಕಾರ
ಗುಣಾವಗುಣಗಳ ಮಣಮಣ
ಜೀವನ ಲೆಕ್ಕದಲ್ಲಿ ಇದ್ಯಾವ ತೃಣ
ತಾಮಸ ಕರಗಿ, ನಲ್ಮೆಯಾದಾಗ ನಿಜಗುಣ
ಅನುದಿನವು ಸಂತಸದ ದಿಬ್ಬಣ
Friday, 2 March 2012
ಜೋಡಣೆಯ ನಂಟು
ತಂಟೆ ತಕರಾರಿನ ನಂಟು
ಗುಪ್ತವಾಗಿರುವ ಗಂಟು
ಉಳಿದ ಮಾತು ನೂರೆಂಟು
Newer Posts
Older Posts
Home
Subscribe to:
Comments (Atom)