kannada padya - kannada poetry
Tuesday, 28 February 2012
ಆಸೆಯ ಅಮಲು
ಅರಳುವ ಮೊದಲು
ತುಮುಲವೆ ತುಂಬಿರಲು
ಬರೆದಿಹೆ ಈ ಸಾಲು.
ನಿನ್ನೊಲುಮೆ ಎನಗಿಯ್ಯಲು
ಸರಸದ ಜೀವನಕೆ ಜೊತೆಯಾಗಲು
ಬರುವೆಯೆಂದು ನೀ ನನ್ನ ಸೇರಲು?
ಅಲೆಯಲಿ ಬೆರೆತ ಅಲೆ
ನೆನಪುಗಳ ಸರಮಾಲೆ
ಮನವಾಗಿದೆ ಆಸೆ ನಿರಾಸೆಗಳ ಉಯ್ಯಾಲೆ
ಬಂದೊಲಿಯುವೆ ನೀನೆಂದು ಬಾಲೆ ?
Newer Posts
Home
Subscribe to:
Comments (Atom)